"Turkey"

ಟರ್ಕಿ ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯು…
ಟರ್ಕಿ ಯುರೋಪ್ ಮತ್ತು ಏಷ್ಯಾ ಖಂಡಗಳ ಸಂಧಿಸ್ಥಾನದಲ್ಲಿರುವ ಒಂದು ರಾಷ್ಟ್ರ. ಆದುದರಿಂದ ಕೆಲವೊಮ್ಮೆ ಇದನ್ನು ಯುರೇಷ್ಯಾದ ದೇಶವೆಂದು ಗುರುತಿಸಲಾಗುತ್ತದೆ. ಪಶ್ಚಿಮ ಏಷ್ಯಾದ ಅನಟೋಲಿಯಾ ಜಂಬೂದ್ವೀಪದಿಂದ ಆಗ್ನೇಯ ಯುರೋಪಿನ ಬಾಲ್ಕನ್ ಪ್ರದೇಶದವರೆಗೆ ಹಬ್ಬಿರುವ ಟರ್ಕಿಗೆ ೮ ರಾಷ್ಟ್ರಗಳು ನೆರೆಹೊರೆಯವು. ವಾಯವ್ಯಕ್ಕೆ ಬಲ್ಗೇರಿಯ; ಪಶ್ಚಿಮಕ್ಕೆ ಗ್ರೀಸ್; ಈಶಾನ್ಯಕ್ಕೆ ಜಾರ್ಜಿಯ; ಪೂರ್ವದಲ್ಲಿ ಇರಾನ್, ಆರ್ಮೇನಿಯ ಮತ್ತು ಅಜರ್ ಬೈಜಾನ್; ಆಗ್ನೇಯಕ್ಕೆ ಇರಾಖ್ ಮತ್ತು ಸಿರಿಯ ರಾಷ್ಟ್ರಗಳಿವೆ. ಟರ್ಕಿಯ ದಕ್ಷಿಣದಲ್ಲಿ ಮೆಡಿಟೆರೇನಿಯನ್ ಸಮುದ್ರ; ಪಶ್ಚಿಮದಲ್ಲಿ ಈಜಿಯನ್ ಸಮುದ್ರ ಮತ್ತು ಈಜಿಯನ್ ದ್ವೀಪಸಮೂಹಗಳು; ಉತ್ತರದಲ್ಲಿ ಕಪ್ಪು ಸಮುದ್ರಗಳು ಸಹ ಇವೆ. ಯುರೋಪ್ ಮತ್ತು ಏಷ್ಯಾಗಳ ಗಡಿಯೆಂದು ಪರಿಗಣಿಸಲ್ಪಡುವ ಮರ್ಮಾರಾ ಸಮುದ್ರ ಮತ್ತು ಬಾಸ್ಪೋರಸ್ ಕೊಲ್ಲಿಗಳು ಟರ್ಕಿಯ ಅನಟೋಲಿಯ ಮತ್ತು ಟ್ರಾಕ್ಯಾಗಳನ್ನು ಬೇರ್ಪಡಿಸುತ್ತವೆ. ಹೀಗಾಗಿ ಟರ್ಕಿಯ ಭೂಪ್ರದೇಶವು ಎರಡೂ ಖಂಡಗಳಲ್ಲಿ ವ್ಯಾಪಿಸಿದೆ.
  • Capital: ಅಂಕಾರಾ
  • Largest city: ಇಸ್ತಾಂಬುಲ್
  • Official languages: ಟರ್ಕಿಷ್
  • Demonym(s): Turkish
  • Government: ಸಾಂಸದಿಕ ಗಣರಾಜ್ಯ
  • GDP (PPP): 2007 estimate
  • GDP (nominal): 2007 Q1 (January-March) estimate
ಇಂದ ಡೇಟಾ: kn.wikipedia.org